govt.oea@gmail.com +91 94485 80898

ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ದ್ಯೇಯೋದ್ಧೇಶಗಳು

  • ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ಕುಂದುಕೊರತೆಗಳಿಗೆ ಸ್ಪಂದಿಸುವುದು ಮತ್ತು ಸಮಸ್ಯೆಗಳನ್ನು ಸಂಬ೦ಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಸಂಬ೦ಧಪಟ್ಟ ಅಧಿಕಾರಿ ವರ್ಗ ಮತ್ತು ಇಲಾಖೆಗಳೊಡನೆ ಸಹಕರಿಸುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರಲ್ಲಿ ಸ್ನೇಹಪರ, ಸಮಾನತೆ, ಜೇಷ್ಠತೆ, ಹಿತಾಸಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ಸೌಹಾರ್ದತೆ ಮೊದಲಾದ ಉನ್ನತ ಭಾವನೆಗಳನ್ನು ಬೆಳೆಸುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರಿಗೆ ಬೇರೆಯವರಿಂದ ಕರ್ತವ್ಯದಲ್ಲಿ ತೊಂದರೆ, ಲೈಂಗಿಕ ದೌರ್ಜನ್ಯ, ಯಾವುದೇ ವಿಧವಾದ ತೊಂದರೆಗಳಾದಲ್ಲಿ, ಅವುಗಳನ್ನು ನಿವಾರಿಸುವಲ್ಲಿ ಕಾನೂನು ಸಲಹೆ ಮತ್ತು ನೆರವು ಪಡೆಯುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರು ಆಕಸ್ಮಿಕ ಅಪಘಾತ/ ಮರಣಕ್ಕೊಳಗಾದಾಗ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ತಾತ್ಕಾಲಿಕವಾಗಿ ನೆರವು ನೀಡುವುದು ಮತ್ತು ಅವರಲ್ಲಿ ಸ-ಸಹಾಯ ಗುಂಪುಗಳನ್ನು ರಚಿಸಿ, ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುವುದು. ಕುಟುಂಬ ಕಲ್ಯಾಣ, ವಿಮಾ ಯೋಜನೆ, ಸಣ್ಣ ಉಳಿತಾಯ ಯೋಜನೆಗಳ ಕುರಿತು ಅವರಿಗೆ ತಿಳುವಳಿಕೆ ನೀಡುವುದು.

  • ಸಂಘದ ವತಿಯಿಂದ ರಾಷ್ಟ್ರೀಯ ಮತ್ತು ನಾಡ ಹಬ್ಬಗಳಾದ ಕನ್ನಡ ರಾಜ್ಯೋತ್ಸವ, ಶಿಕ್ಷಕರ ದಿನಾಚರಣೆ, ಗಣರಾಜ್ಯೋತ್ಸವ, ಕಾರ್ಮಿಕರ ದಿನಾಚರಣೆ, ಗಾಂಧಿ ಜಯಂತಿ, ಅಂಬೇಡ್ಕರ ಜಯಂತಿ, ಸ್ವಾತಂತ್ರ ದಿನಾಚರಣೆ, ಮೊದಲಾದ ಹಬ್ಬಗಳನ್ನು ಆಚರಿಸುವುದು.

  • ಸದರಿ ಸಂಘವು ತನ್ನ ಧ್ಯೇಯೋದ್ಧಶಗಳ ಸಾಧನೆಗಳ ಈಡೇರಿಕೆಗಾಗಿ ಇತರ ಸಂಘಗಳ ಜೊತೆಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿರುತ್ತದೆ.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ಸಭೆ, ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಅವರ ಹಕ್ಕುಬಾಧ್ಯತೆಗಳ ಕುರಿತು ತಿಳುವಳಿಕೆ ನೀಡುವುದು ಮತ್ತು ಹಕ್ಕುಬಾಧ್ಯತೆಗಳಿಗೆ ದಕ್ಕೆಗಳುಂಟಾದಲ್ಲಿ, ಆ ಕುರಿತು ಕಾನೂನು ಸಲಹೆ ಮಾರ್ಗದರ್ಶನ ಪಡೆಯುವುದು.

  • ಉಚಿತ ಆರೋಗ್ಯ ತಪಾಸಣ, ನೇತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು. ಆರೋಗ್ಯ ಇಲಾಖೆಯು ನೀಡುವ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸದಸ್ಯರುಗಳಿಗೆ ಮಾರ್ಗದರ್ಶನ ನೀಡುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರಲ್ಲಿ ಸಮಾಜ ಸೇವಾಕಾಂಕ್ಷೆಯುಳ್ಳುವರನ್ನು ಗುರುತಿಸಿ ಅವರಿಗೆ ಬಹುಮಾನ ಮತ್ತು ಬಿರುದುಗಳನ್ನು ನೀಡಿ ಸತ್ಕರಿಸುವುದು.

  • ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಿಂದ ರಸ್ತೆ ಬದಿಯಲ್ಲಿ ಸಾಲು ಸಸಿಗಳನ್ನು ನೆಡುವುದು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

  • ಸಾಂಸ್ಕçತಿಕ ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅದಕ್ಕಾಗಿ ನಾಟಕ, ಸಂಗೀತ, ನೃತ್ಯ ಮೊದಲಾದ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ನಿವೃತ್ತ ನೌಕರರಿಗೆ ನೆರವಾಗುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರಿಗಾಗಿ ಉಚಿತ ಆರೋಗ್ಯ ತಪಾಸಣ ಕೇಂದ್ರಗಳು, ಆಸ್ಪತ್ರೆಗಳನ್ನು ಸ್ಥಾಪಿಸುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ವರ್ಗದವರ ಕೆಲಸದಲ್ಲಿ ಖಾಯಂ ಭಡ್ತಿ, ಸಂಬಳ, ಪಿಂಚಣಿ, ಪದೋನ್ನತಿ, ವರ್ಗಾವಣೆ, ಕೆಲಸದ ಒತ್ತಡ, ಖಾಲಿಹುದ್ದೆಗಳ ಭರ್ತಿ, ನಿವೃತ್ತಿ ಪ್ರಕರಣಗಳು ಮೊದಲಾದವುಗಳ ಕುರಿತು ಸಂಬ೦ಧಪಟ್ಟ ಅಧಿಕಾರಿಗಳಲ್ಲಿ ನಿವೇದಿಸಿಕೊಳ್ಳುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ನೀಡುತ್ತಿರುವ ವೇತನ, ವಿವಿಧ ಯೋಜನೆಗಳು ಹಾಗೂ ಹಲವು ರೀತಿಯ ಅನುದಾನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳುವಳಿಕೆ ನೀಡುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ಕೆಲಸದ ಒತ್ತಡ, ಮಾನಸಿಕ ಒತ್ತಡ ಮೊದಲಾದ ಸಮಸ್ಯೆಗಳನ್ನು ನಿವಾರಿಸಲು ಸಲಹೆ ಕೇಂದ್ರಗಳನ್ನು ಸ್ಥಾಪಿಸುವುದು.

  • ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ಕೌಟುಂಬಿಕ ಸಲಹಾ ಕೇಂದ್ರವನ್ನು ಸ್ಥಾಪಿಸುವುದು.

  • ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್.ಎಚ್.ಎಮ್. ವಿಭಾಗಗಳ ಒಳ ಗುತ್ತಿಗೆ ನೌಕರರಿಗೆ ಮನೋವೈಜ್ಞಾನಿಕ, ಸಾಂತ್ವನ ಹಾಗೂ ಪುನಃಚೇತನ ಕೇಂದ್ರಗಳನ್ನು ಸ್ಥಾಪಿಸುವುದು.

ಅಧ್ಯಕ್ಷರು

ಸಮಾನ್ಯ ಶ್ರೀ. ಸುಧಾಕರ ಯಾದವ

ಸಂಘದ ವಕೀಲರು

ಸಮಾನ್ಯ ಶ್ರೀ. ನಾಗರಾಜ ಯಾದವ

ಸಂಘದ ಸಲಹೆಗಾರರು

ಸಮಾನ್ಯ ಶ್ರೀ. ಮಂಜೇಶ ಸಿಂಗ್